Thursday, September 30, 2010

ನಿಜವಾದ ಭಯೋತ್ಪಾದಕ ಯಾರು?

ಭಯೋದ್ಯಮ !

ಸುಮಾರು ಎರಡು ವರ್ಷದ ಹಿಂದಿನ ಘಟನೆ...

ನನ್ನ ಒಬ್ಬ ಗೆಳೆಯನ ಗೆಳೆಯ ಪ್ರಕಾಶ ಬೆಂಗಳೂರು ವಾಸಿ. ನನಗೆ ಫೋನ್ ಮಾಡಿ ' ಪ್ರೆಸ್ ಕ್ಲಬ್ನಲ್ಲಿ ರಾತ್ರಿ ಚಿಕ್ಕ ದಾಗಿ ಪಾರ್ಟಿ ಮಾಡಣ, ನನ್ನ ಹೊಸ ಫ್ರೆಂಡ್ ಒಬ್ಬ ಪತ್ರಕರ್ತ -ಬರಹಗಾರ ಜೊತೇಲಿ ಇರ್ತಾರೆ' ಅಂದ್ರು. ಸರಿ ಅಂತ ಹೋದೆ. ಅಲ್ಲಿ ಅವರು ಕಾದಿದ್ದು ಅವರ ಜೊತೇಲಿ ಸಿಗರೇಟು (' ಬೆಂಕಿ !' ) ಎಳಿತಾ ಆಕಾಶ ನೋಡ್ತಾ ಇದ್ದವನು ಪತ್ರಕರ್ತ -ಬರಹಗಾರ- ಬುದ್ದಿಜೀವಿ ಎಲ್ಲ ಲಕ್ಷಣ ಗಳನ್ನೂ ಹೊಂದಿದ್ದ. ಪ್ರಕಾಶ ನಮ್ಮಿಬ್ಬರಿಗೂ ಪರಿಚಯ ಮಾಡಿಸಿದರು . ಆತ ' ಬೆಂಕಿ ' ಯ ಸಂಸ್ಕೃತ ಹೆಸರಿನ ಪತ್ರಿಕೇಲಿ ಬರೆಯುವ ವಿಚಾರವಾದಿ ಅಂತ ತಿಳಿತು. ಇನ್ನೊಂದು ವಿಷಯ -' ಇವರು ಬ್ರಾಹ್ಮಣ ಹುಡುಗಿನ ಮದ್ವೆ ಆಗಿದಾರೆ ' ಅಂದ್ರು ಪ್ರಕಾಶ, ಯಾವದೋ ಒಂದು ಬಾಟಲಿ ತರಿಸಿದರು. ವಿಚಾರವಾದಿ ಪತ್ರಕರ್ತ ಭಯಂಕರ ಪೋಸ್ ನೀಡಿದರು. ' ಈ ಬ್ರಾಹ್ಮಣರ ರಕ್ತ ಹೀರಬೇಕು' ಅಂದರು. ನನಗೆ ಇವರು ಅನಂತ ಮೂರ್ತಿ ಥರ ಕಾಣಿಸ ತೊಡಗಿದರು. ಇವರ ಬ್ರಾಹ್ಮಣ ಪತ್ನಿಯ ಬಗ್ಗೆ ಮರುಗಿದೆ. ಅವರು ರಕ್ತ ಕುಡಿಯಕ್ಕೆ ಮದ್ವೆ ಅಆಗಿರಬೇಕು ಅಂತ ಕಾಣಿಸಿತು. ಸದ್ಯ ನನ್ನ ರಕ್ತ ಇವರಿಗೆ ಬೇಡ ಅಂತ ಸ್ವಲ್ಪ ಸಮಾಧಾನ ಕೂಡ ಆಯ್ತು.

' ಇವ್ರು ಒಂದು ಪುಸ್ತಕಾನು ಬರ್ದಿದಾರೆ ' ಅಂತ ನನ್ನ ಫ್ರೆಂಡ್ ನ ಫ್ರೆಂಡ್ ಹೇಳಿದ. ನಾನು ಆಸಕ್ತಿಯಿಂದ ಏನು ಪುಸ್ತಕ, ಯಾವ ಬಗ್ಗೆ ? ಅಂತ ಕೇಳಿದೆ. ಬೆಂಕಿಯಿಂದ ಹೊಗೆನನ್ನ ಮುಖಕ್ಕೆ ಬಿಡುತ್ತಾ ' ಆ ವ್ಯಕ್ತಿ ಹೇಳಿದ- " ನಿಜವಾದ ಭಯೋತ್ಪಾದಕರು ಯಾರು ? " ಅನ್ನುವ ಬಗ್ಗೆ ಬರೆದಿದ್ದೀನಿ ಅನ್ನೋದೇ ? ನನಗೆ ತುಂಬಾ ಬೇಸರವಾಯಿತು, ಇದು ನಾನು ಬರೀಬೇಕು ಅಂದುಕೊಂಡ ವಿಷಯ, ಆಗಲೇ ಇನ್ನೊಬ್ಬ ಬರೆದುಬಿಟ್ಟನಲ್ಲ ಅಂತ ನೊಂದುಕೊಂಡೆ. ನನ್ನ ಫ್ರೆಂಡ್ ಗಳೆಲ್ಲ ' ನೀನು ತುಂಬಾ ನಿಧಾನ ' ಅನ್ನೋದು ನಿಜ ಆಯ್ತಲ್ಲ ! . ಜೋಡಿಸಿಟ್ಟ ದರಲ್ಲಿ ಒಂದು ಪೆಗ್ ಕುಡಿದೆ. ಹಾಗೇ ಮನಸ್ಸು ವಿಶಾಲವಾಗಲು ಶುರುವಾಯಿತು. ಇರಲಿ, ಯಾರೋ ಬರೆದರಲ್ಲ! ಇವರನ್ನೇ ಅಭಿನಂದಿಸೋಣ ಅಂದುಕೊಂಡು ಮುಂದುವರೆಸಿದೆ. ಉತ್ತರ ನನಗೆ ಗೊತ್ತಿದ್ದದ್ದೇ. ಆದರೂ ಪಾರ್ಟಿ ಗೆ ಕರೆದ ವರಿಗೆ ಸಂತೋಷ ಆಗಬೇಕಲ್ಲ ಅಂತ ಕೇಳಿದೆ.

" ಅಂದ ಹಾಗೆ ನಿಜವಾದ ಭಯೋತ್ಪಾದಕ ಯಾರು? " ( ಇವರ ಮಾಲಿಕರನ್ನ ಕಂಡರೆ ಈಗೀಗ ಜನಕ್ಕೆ ನಗು ಬರುತ್ತೆ ಹೊರತು ಭಯ ಆಗಲ್ಲ ಅಂತ ಜೋಕ್ ಮಾಡ್ಲ ಅಂದುಕೊಂಡೆ, ಸದ್ಯ ಮಾಡ್ಲಿಲ್ಲ ). ಪೆಗ್ ಹಾಕುತ್ತಾ ಹೊಗೆ ಬಿಡುತ್ತಾ ಆತ ವಿವರಿಸಲು ಶುರು ಮಾಡಿದ. ಮಾಡ್ತಾ ಮಾಡ್ತಾ ನನಗೆ ಒಂಥರಾ ಸಂತೋಷ ಆಗ್ತಾ ಇತ್ತು- ಯಾಕಂದ್ರೆ ನಾನು ಅಂದುಕೊಂಡ ಉತ್ತರ ಬೇರೆ. ಇವರು ಹೇಳೋದು ಅದೇ ಮಾಮೂಲಿ ಇರಾನ್ , ಇರಾಕ್ , ಪಾಕಿಸ್ತಾನಗಳ ವಾದವನ್ನೇ , ಅಮೇರಿಕಾ ದೇಶವೇ ದೊಡ್ಡ ಭಯೋತ್ಪಾದಕ ಅಂತ . ಇದನ್ನ ತಿಳಿಯಕ್ಕೆ ಮುಸ್ಲಿಂ ದೇಶಗಳ ಟಿವಿ ಹಾಕಿದರೆ ಸಾಕು. ಅಲ್ಲದೆ ನಮ್ಮ ಎಲ್ಲಾ ಬುದ್ದಿಜೀವಿ ಪತ್ರಕರ್ತರು ಇದನ್ನ ಪುಂಗಿ ಊದೀ ಊದೀ ಹಳಸಲು ಮಾಡಿದ್ದಾಗಿದೆ. ಇದಕ್ಕೆ ಪ್ರೆಸ್ ಕ್ಕಬ್ಗೆ ಬರಬೇಕಾ? ಸಮಯ ವೇಸ್ಟ್ ಆಯ್ತಲ್ಲ ಅಂತ ಬೇಸರವೂ ಆಯ್ತು. ನನಗೆ ಸುಮ್ಮನಿರಲು ಆಗಲಿಲ್ಲ, ಸ್ವಲ್ಪ ಜೋರಾಗಿಯೇ ಆತನಿಗೂ ನನಗು ವಾದ ನಡೆದು ಕಡೆಗೆ ಪ್ರಕಾಶ ' ನನ್ನ ಕಿವಿಯ ಹತ್ತಿರ ' ಸಾರಿ, ನಾನು ಇವರನ್ನ ಏನೋ ಅಂದ್ಕೊಂಡಿದ್ದೆ ' ಅಂದರು.

ಅಯ್ಯೋ ಬಿಡಿ, ನಾನು ೨೫ ವರ್ಷಗಳ ಕಾಲ ಇವರನ್ನೆಲ್ಲ ನಿಮ್ಮ ಹಾಗೆ ಅಂದ್ಕೊಂಡಿದ್ದೆ, ಅಂದೆ.

ಅಂದ ಹಾಗೆ ನಿಜವಾದ ಭಯೋತ್ಪಾದಕ ಯಾರು?

ಎ ಕೆ ೪೭ ಥರದ ಗಂ ತಗೊಂಡು ಗುಂಡು ಹಾರಿಸಿದರೆ , ಬಾಂಬು ಸಿಡಿದರೆ ಜನ ಗಾಯಗೊಂಡರೆ , ಸತ್ತರೆ ಮಾತ್ರ ಭಯೋತ್ಪಾದನೆಯೇ? ವಿಮಾನ, ರೈಲು, ಬಸ್ಸು, ಕಾರು ಟ್ರಾಫಿಕ್ನಲ್ಲಿ , ಅಪರಾಧಗಳಲ್ಲಿ ಕೂಡಾ ಸಾಯೋದು , ಗಾಯಗೊಳ್ಳೋದು ಇಲ್ಲವೇ? ಹಾಗಂತ ಭಯ ಯಾಕೆ? ಅನವಶ್ಯಕ ರಸ್ತೆಗೆ, ಪ್ರವಾಸಿ ತಾಣಕ್ಕೆ, ಹೋಗಬೇಡಿ, ಪ್ರಯಾಣ ಮಾಡಬೇಡಿ ಅಷ್ಟೇ! ಎಲ್ಲಿದೆ ಭಯ?

ಯಾಕೆ ನಮ್ಮ ಪೋಲಿಸರೇನು ಕಡಿಮೆ? ಅವರನ್ನ ನೋಡಿದ್ರೆನೆ ಹೆದರಿಕೆ ಆಗಲ್ವೆ? ಒಳಗೆ ಹಾಕಿ ರಿಪೇರಿ ಮಾಡೋದು ಅಂದ್ರೆ ಏನು ಅಂತ ಅನುಭವಿಸಿದವರು ಹೇಳ್ತಾರೆ ಕೇಳಿ! ಆದ್ರೆ ನಿಮ್ಮ ಜೋಬಲ್ಲಿ ದುದ್ದಿಲ್ಲದಿದ್ರೆ, ಅಥವಾ ಇರೋರು ನಿಮ್ಮನ್ನ ರಿಪೇರಿ ಮಾಡಕ್ಕೆ ಅಂತ ಅವ್ರಿಗೆ ದುಡ್ಡು ಕೊಟ್ರೆ ಮಾತ್ರ ಅಲ್ವೇ ಭಯ? ಪೋಲಿಸಿನವರು ಯಾರಾದ್ರೂ ಭಿಕ್ಶುಕರನ್ನ, ಅಥವಾ ಅವ್ರು ಕೇಳಿದಷ್ಟು ಹಣ ಕೂಟ್ಟ ಮೇಲೂ ಲಾಕಪ್ ಡೆತ್ ಮಾಡಿದ್ದು ಕೇಳಿದೀರಾ? ಹಣ , ಚಿನ್ನ, ದುಬಾರಿ ವಸ್ತು ಇಲ್ಲ ಅಂದ ಮೇಲೆ ಇನ್ನೇನು? ಈ ವಿಚಾರದಲ್ಲಿ ಸ್ವಲ್ಪ ಹುಷಾರಾಗಿದ್ರೆ ಸರಿ, ಭಯ ಎಲ್ಲಿ?

ಇನ್ನು ಒಸಾಮಾ ಆಗಲಿ, ದಾವೂದ್ ಆಗಲಿ, ಮಂತ್ರಿಗಳಾಗಲಿ , ಬಿ ಎಂ ಟಿ ಸಿ ಬಸ್ಸು , ರೇಸ್ ಕಾರು, ಯಾರೇ ಆಗಲಿ, ನಿಮ್ಮ ಪಾಡಿಗೆ ಮನೇಲಿದ್ರೆ ಭಯ ಏನು? ಅಲ್ಲವೇ ? .... ಅಲ್ಲಿಗೆ - ನಮ್ಮ ಪಾಡಿಗೆ ಮನೇಲಿದ್ರು ಯಾರಿಗೆ ನಾವು ಹೆದರಬೇಕೋ ಅವರು ಮಾತ್ರ ಭಯೋತ್ಪಾದಕರು ಅಂತ ಒಪ್ತೀರಾ ತಾನೆ ?

ನಾನು ಏನು ಹೇಳಕ್ಕೆ ಹೊರಟೆ ಅಂದ್ರೆ ನೀವು ಪ್ರವಾಸಕ್ಕೂ ಹೋಗಲ್ಲ, ಪಾರ್ಕಿಗು ಹೋಗಲ್ಲ, ಬಿ ಎಂ ಟಿ ಸಿ ಬಸ್ಸಿನ ಎದುರಿಗೂ ಬರಲ್ಲ, ಹಣ, ಚಿನ್ನ ಲಾಕರಲ್ಲಿದೆ, ರೈಲು- ವಿಮಾನ ಹತ್ತಲ್ಲ, ಪೊಲೀಸರು ಸಿಕ್ಕಿದ್ರೆ ಕೈಯಲ್ಲಿದ್ದಷ್ಟು ಕೊಡ್ತೀರಿ, ಚಿಕ್ಕ ಚಿಕ್ಕ ಗಲ್ಲಿಯಲ್ಲೇ ಓಡಾಡಿಕೊಂಡು ಕ್ಷೆಮವಗಿದ್ದೀನಿ ಅಂದುಕೊಂಡಿದೀರಿ. ಆದರೂ ಕೊಡ ನಿಮ್ಮನ್ನ ಜನ ಅಟ್ಟಾಡಿಸಿ ಕಲ್ಲು ಹೊಡೆಯವ ಹಾಗೆ ಮಾಡಬಲ್ಲ, ನಿಮ್ಮ ಮದುವೆಯಾದ ಗಂಡನೇ/ ಹೆಂಡತಿಯೇ ನಿಮ್ಮನ್ನ ಹೊರಗೆ ಹಾಕುವಂತೆ ಮಾಡಬಲ್ಲ, ಅಪ್ಪ, ಅಮ್ಮ, ಅಣ್ಣ ತಮ್ಮ, ಸ್ನೇಹಿತರು, ಬಳಗ, ನಿಮ್ಮನ್ನ ಚೀ ಥೂ ಎಂದು ಉಗಿವುವಂತೆ ಮಾಡಬಲ್ಲ, ನಿಮ್ಮ ಕಂಪನಿಯಿಂದ ನಿಮ್ಮನ್ನ ವಜಾ ಮಾಡಿಸಬಲ್ಲ, ಜೀವನ ಪೂರ್ತಿ ಕಾಪಾಡಿಕೊಂಡು ಬಂದ ಮಾನ ಮರ್ಯಾದೆಯನ್ನ ಸುಳ್ಳು ಸುಳ್ಳೇ ಹೇಳಿ ನಿಮ್ಮನ್ನ, ಮತ್ತು ನಿಮ್ಮ ಮನೆಯವರೆನ್ನೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತರಬಲ್ಲವರಿದ್ದರೆ ಅವರಿಗಿಂತ ದೊಡ್ಡ ಭಯೋತ್ಪಾದಕರು ಇನ್ನ್ಯಾರು ಹೇಳಿ?

ಇದನ್ನೆಲ್ಲಾ ಮಾಡಬಲ್ಲ ಸರ್ವಶಕ್ತ ಭಯೋತ್ಪಾದಕರು ಯಾರು ಗೊತ್ತೆ? ಇವರೇ " ಪತ್ರಕರ್ತರು ? ಮೀಡಿಯಾದವರು, ಚಾನ್ನೆಲ್ಲುಗಳು, ಬುದ್ದಿಜೀವಿಗಳು " . ಮೀಡಿಯಗಿಂಥ ದೊಡ್ಡ ಭಯೋತ್ಪಾದಕರು ಇನ್ಯಾರಿರಲು ಸಾಧ್ಯ? ದಿನಾ ನಮ್ಮ ಚಾನಲ್ಲುಗಳು, ಪತ್ರಿಕೆಗಳು, ಪುಸ್ತಕಗಳಲ್ಲಿ ಸುಳ್ಳು ಹೇಳಿಕೊಂಡು, ಯಾವ ಮುಸ್ಲಿಂ ದೇಶದಲ್ಲೂ ಇಲ್ಲದ, ಒಸಮ , ದಾವೂದ್ ಗಳು ನಾಚಿಕೊಂಡು ಬೆರಗಾಗುವಂಥಾ ಭಯೋತ್ಪಾದಕರು ನಮ್ಮ ಕರ್ನಾಟಕದಲ್ಲೇ ಬೇಕಾದಷ್ಟಿದ್ದಾರೆ.

ಇದೆ ಕಾರಣಕ್ಕೆ ಮಾಜಿ ರೌಡಿಗಳು, ಪತ್ರಿಕೋದ್ಯಮ ( ಭಯೋದ್ಯಮ ! ) ಮಾಡುತ್ತಾರೆ, ಭಯ ಹುಟ್ಟಿಸುವ ಹೆಸರನ್ನೂ ತಮ್ಮ ಪತ್ರಿಕೆಗೆ ಇಟ್ಟು ಇನ್ನಷ್ಟು ಭಯ ಹುಟ್ಟಿಸುತ್ತಾರೆ.

ಏನೋ ಕುಡಿದ ಧೈರ್ಯದಲ್ಲಿ ಇಷ್ಟನ್ನೂ ಆವತ್ತು ಪ್ರೆಸ್ ಕ್ಕಬ್ಬಿನಲ್ಲಿ ಹೇಳಿದೆ. ನಾನೇ ಬಿಲ್ಲು ಕೊಟ್ಟಿದ್ದಕ್ಕೆ ಅಂತ ಆ ಪತ್ರಕರ್ತ ನನ್ನನ್ನ ಅವತ್ತು ಸುಮ್ಮನೆ ಬಿಟ್ಟರೋ ಅಥವಾ ಅವರೂ ಸಕತ್ತಾಗೆ ಕುಡಿದಿದ್ದರಿಂದನೋ ಗೊತ್ತಿಲ್ಲ. ಆಮೇಲಿಂದ ನನ್ನ ಆ ಫ್ರೆಂಡ್ ಪ್ರಕಾಶ ಕೂಡ ಸಿಕ್ಕಿಲ್ಲ. ಅವರಿಗೆ 'ಬೆಂಕಿಯ' ಭಯ ಆಗಿರಬೇಹು.